Posts

Showing posts from December, 2019

ಶ್ರೀನಾರಾಯಣಶತಕಮ್

(೧) ಶ್ರೀನಾರಾಯಣಶತಕಮ್ https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3   (Audio link) (ಅತ್ಯಷ್ಟಿಶ್ಛಂದಃ—  ಶಿಖರಿಣೀವೃತ್ತಮ್)  ಬೃಹದ್ದಿವ್ಯಂ ವಿಶ್ವಂ ಸೃಜತಿ ವಿಧಿರೂಪೇಣ ವಪುಷಾ ಅವತ್ಯಾನಂದೇನ ಪ್ರಕಟಿತಸಮಸ್ತಂ ವಿಷ್ಣುವಪುಷಾ | ಹರತ್ಯನ್ತೇ ಸರ್ವಂ ಪರಮಶಿವರೂಪೇಣ ವಪುಷಾ ಅವತ್ವಾನಂದೀ ನಃ ಪರಮಸುಖದಾನೇನ ಕೃಪಯಾ || ೧ || ಬ್ರಹ್ಮರೂಪ ಧರಿಸಿ ಬೃಹತ್ತೂ, ದಿವ್ಯವೂ ಆದ ವಿಶ್ವವನ್ನು ಸೃಷ್ಟಿಸಿ, ವಿಷ್ಣುರೂಪಿಯಾಗಿ ಪರಮಾನಂದದಿಂದ ಪ್ರಕಟವಾದ ಸಮಸ್ತವನ್ನೂ ಸಲಹಿ, ಶಿವನಾಗಿ ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನೊಳಕ್ಕೇ ವಿಲೀನ ಮಾಡುವ ಆನಂದಮಯನಾದ ಭಗವಂತನಾದ ಶ್ರೀಮನ್ನಾರಾಯಣನು ಕೃಪೆಯಿಂದ ಪರಮಸುಖರೂಪವಾದ ಮೋಕ್ಷ / ಜೀವನ್ಮುಕ್ತಿಯನ್ನಿತ್ತು ನಮ್ಮನ್ನು ರಕ್ಷಿಸಲಿ. ಮಹಾವಿಷ್ಣುಂ ವನ್ದೇ ಜಗತಿ ನಿಖಿಲೇ ವ್ಯಾಪ್ತವಪುಷಂ ಸ ಸೃಷ್ಟ್ಯಾದೌ ನಾರಾಯಣವಪುಧೃತಃ ಕ್ಷೀರಜಲಧೌ | ಸ ಶೇಷೇऽಭೂಚ್ಛಾಯೀ ವರವರದಮೂರ್ತಿಃ ಪರಗತಿಃ ಸ ಪಾಯಾದ್ದೇವೋ ಮಾಧವಮಧುಹರಃ ಪೂರ್ಣಪುರುಷಃ || ೨ || ಸಮಗ್ರ ಜಗತ್ತಿನಲ್ಲಿ ವ್ಯಾಪಿಸಿರುವ ಶರೀರವುಳ್ಳ ಮಹಾವಿಷ್ಣುವನ್ನು ವಂದಿಸುತ್ತೇನೆ. ಅವನು ಸೃಷ್ಟಿಯ ಆದಿಯಲ್ಲಿ ಆದಿನಾರಾಯಣರೂಪ ಧರಿಸಿ, ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಪವಡಿಸಿದ್ದನು. ಅಂತಹ ತನ್ನ ನಿಜಭಕ್ತರಿಗೆ ಬೇಡಿದ ವರವನ್ನೀವ ವರದಮೂರ್ತಿಯೂ, ಪರಗತಿ (ಶ್ರೇಷ್ಠ ಹಾದಿ—  ಮು...