Posts

Showing posts from April, 2020

कृष्णामृतमहार्णवः, ಕೃಷ್ಣಾಮೃತಮಹಾರ್ಣವಃ

कृष्णामृतमहार्णवः (आचार्य-मध्वः) ಕೃಷ್ಣಾಮೃತಮಹಾರ್ಣವಃ (ಆಚಾರ್ಯ ಮಧ್ವರು) ॐ (ओ३म्) १) मङ्गलाचरणं प्रस्तावना च अर्चितः संस्मृतो ध्यातः कीर्तितः कथितः श्रुतः । यो ददात्यमृतत्वं हि स मां रक्षतु केशवः ॥ १ ॥ ಓ೩ಮ್ ೧) ಮಙ್ಗಲಾಚರಣಮ್ ಮತ್ತು ಪ್ರಸ್ತಾವನಾ ಅರ್ಚಿತಃ ಸಂಸ್ಮೃತೋ ಧ್ಯಾತಃ ಕೀರ್ತಿತಃ ಕಥಿತಃ ಶ್ರುತಃ । ಯೋ ದದಾತ್ಯಮೃತತ್ವಂ ಹಿ ಸ ಮಾಂ ರಕ್ಷತು ಕೇಶವಃ ॥ ೧ ॥ ಭಕ್ತಿಯಿಂದ ಅರ್ಚಿಸಲ್ಪಟ್ಟ (ಬಾಹ್ಯವಾಗಿ ಪೂಜಿಸಲ್ಪಟ್ಟ), ಚೆನ್ನಾಗಿ ಗಾಢವಾಗಿ ಸ್ಮರಿಸಲ್ಪಟ್ಟ (ಮಾನಸಪೂಜೆ), ಏಕಾಗ್ರತೆಯಿಂದ ಧ್ಯಾನಿಸಲ್ಪಟ್ಟ (ನಿರಂತರ ಸ್ಮರಣೆ), ಕೀರ್ತನೆಮಾಡಲ್ಪಟ್ಟ (ಹಾಡಲ್ಪಟ್ಟ, ಸ್ತುತಿಸಲ್ಪಟ್ಟ, ತನ್ನಷ್ಟಕ್ಕೆ ಗುಣಗಾನಮಾಡಲ್ಪಟ್ಟ), ಕಥಿಸಲ್ಪಟ್ಟ (ಕೇಳುವವರಿಗೆ ಹೇಳಲ್ಪಟ್ಟ), ಗಮನಕೊಟ್ಟು ಕೇಳಲ್ಪಟ್ಟ (ಸಾವಧಾನತೆಯಿಂದ ಶ್ರವಣಮಾಡಲ್ಪಟ್ಟ) ಯಾವನು ಅಮೃತಸ್ವರೂಪವಾದ ಮೋಕ್ಷವನ್ನೇ ದಯಪಾಲಿಸುವನೋ ಅಂತಹ ಕೇಶವನು ನನ್ನನ್ನು ರಕ್ಷಿಸಲಿ. * ಭಕ್ತಿಯಿಂದ ಪೂಜಿಸಿದರೆ, ನೆನೆದರೆ, ಧ್ಯಾನಿಸಿದರೆ, ಹಾಡಿದರೆ, ಆಡಿದರೆ, ಕೇಳಿದರೆ ಸಾವಿರದ ನೆಲೆಯ ನೀಡುವವನು; ಅಂಥ ಕೇಶವ ಕಾಪಾಡಲಿ ನನ್ನನ್ನು.  ಹೀಗೆ, ಅರ್ಚನ, ಸ್ಮರಣ, ಧ್ಯಾನ, ಕೀರ್ತನ, ಕಥನ, ಶ್ರವಣ— ಇವು (೬) ಸಾರ್ಥಕಜೀವನದ ಷಡಂಗಗಳು; ಸಾಧಕನ ನಿತ್ಯಕರ್ಮಗಳು; ಮುಕ್ತಿಯ ಮೆಟ್ಟಿಲುಗಳು. * (—*ಬನ್ನಂಜೆ ಗೋವಿಂದಾಚಾರ್ಯ...