कृष्णामृतमहार्णवः, ಕೃಷ್ಣಾಮೃತಮಹಾರ್ಣವಃ

कृष्णामृतमहार्णवः
(आचार्य-मध्वः)
ಕೃಷ್ಣಾಮೃತಮಹಾರ್ಣವಃ
(ಆಚಾರ್ಯ ಮಧ್ವರು)
ॐ (ओ३म्)

१) मङ्गलाचरणं प्रस्तावना च

अर्चितः संस्मृतो ध्यातः कीर्तितः कथितः श्रुतः ।
यो ददात्यमृतत्वं हि स मां रक्षतु केशवः ॥ १ ॥

ಓ೩ಮ್

೧) ಮಙ್ಗಲಾಚರಣಮ್ ಮತ್ತು ಪ್ರಸ್ತಾವನಾ

ಅರ್ಚಿತಃ ಸಂಸ್ಮೃತೋ ಧ್ಯಾತಃ ಕೀರ್ತಿತಃ ಕಥಿತಃ ಶ್ರುತಃ ।
ಯೋ ದದಾತ್ಯಮೃತತ್ವಂ ಹಿ ಸ ಮಾಂ ರಕ್ಷತು ಕೇಶವಃ ॥ ೧ ॥

ಭಕ್ತಿಯಿಂದ ಅರ್ಚಿಸಲ್ಪಟ್ಟ (ಬಾಹ್ಯವಾಗಿ ಪೂಜಿಸಲ್ಪಟ್ಟ), ಚೆನ್ನಾಗಿ ಗಾಢವಾಗಿ ಸ್ಮರಿಸಲ್ಪಟ್ಟ (ಮಾನಸಪೂಜೆ), ಏಕಾಗ್ರತೆಯಿಂದ ಧ್ಯಾನಿಸಲ್ಪಟ್ಟ (ನಿರಂತರ ಸ್ಮರಣೆ), ಕೀರ್ತನೆಮಾಡಲ್ಪಟ್ಟ (ಹಾಡಲ್ಪಟ್ಟ, ಸ್ತುತಿಸಲ್ಪಟ್ಟ, ತನ್ನಷ್ಟಕ್ಕೆ ಗುಣಗಾನಮಾಡಲ್ಪಟ್ಟ), ಕಥಿಸಲ್ಪಟ್ಟ (ಕೇಳುವವರಿಗೆ ಹೇಳಲ್ಪಟ್ಟ), ಗಮನಕೊಟ್ಟು ಕೇಳಲ್ಪಟ್ಟ (ಸಾವಧಾನತೆಯಿಂದ ಶ್ರವಣಮಾಡಲ್ಪಟ್ಟ) ಯಾವನು ಅಮೃತಸ್ವರೂಪವಾದ ಮೋಕ್ಷವನ್ನೇ ದಯಪಾಲಿಸುವನೋ ಅಂತಹ ಕೇಶವನು ನನ್ನನ್ನು ರಕ್ಷಿಸಲಿ.

*ಭಕ್ತಿಯಿಂದ ಪೂಜಿಸಿದರೆ, ನೆನೆದರೆ, ಧ್ಯಾನಿಸಿದರೆ, ಹಾಡಿದರೆ, ಆಡಿದರೆ, ಕೇಳಿದರೆ ಸಾವಿರದ ನೆಲೆಯ ನೀಡುವವನು; ಅಂಥ ಕೇಶವ ಕಾಪಾಡಲಿ ನನ್ನನ್ನು. 

ಹೀಗೆ, ಅರ್ಚನ, ಸ್ಮರಣ, ಧ್ಯಾನ, ಕೀರ್ತನ, ಕಥನ, ಶ್ರವಣ— ಇವು (೬) ಸಾರ್ಥಕಜೀವನದ ಷಡಂಗಗಳು; ಸಾಧಕನ ನಿತ್ಯಕರ್ಮಗಳು; ಮುಕ್ತಿಯ ಮೆಟ್ಟಿಲುಗಳು.* (—*ಬನ್ನಂಜೆ ಗೋವಿಂದಾಚಾರ್ಯರು)

ಭಗವಂತನ / ವಿಷ್ಣುವಿನ ಬಗ್ಗೆ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ (ಪ್ರಪತ್ತಿ, ಶರಣಾಗತಿ)— ಇವು (೯) ಭಗವದ್ಭಕ್ತನ ನವಧಾ (ನವವಿಧ) ಭಕ್ತಿಯ ಸ್ವರೂಪ.

"ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವನ್ದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ||"

तापत्रयेण सन्तप्तं यदेतदखिलं जगत् ।
वक्ष्यामि शान्तये ह्यस्य कृष्णामृतमहार्णवम् ॥ २ ॥

ತಾಪತ್ರಯೇಣ ಸನ್ತಪ್ತಂ ಯದೇತದಖಿಲಂ ಜಗತ್ ।
ವಕ್ಷ್ಯಾಮಿ ಶಾನ್ತಯೇ ಹ್ಯಸ್ಯ ಕೃಷ್ಣಾಮೃತಮಹಾರ್ಣವಮ್ ॥ ೨ ॥

ಯಾವ ಈ ಅಶೇಷ ವಿಶ್ವವು ಬಹುವಿಧದ ಕಷ್ಟ-ಕೋಟಲೆಗಳಿಂದ ನೊಂದು ಸಂತಾಪದಿಂದ ಬಹುವಾಗಿ ಬೆಂದುಹೋಗಿದೆಯೋ, ಅಂತಹ ಈ ಲೋಕದ ಶಾಂತಿ-ನೆಮ್ಮದಿಗಳಿಗಾಗಿ  "ಕೃಷ್ಣಾಮೃತಮಹಾರ್ಣವಮ್ " ಎಂಬ ಆಚಾರ್ಯ ಮಧ್ವರ ವಿವಿಧ ಪುರಾಣಾದಿಶಾಸ್ತ್ರಗಳೆಂಬ ಮಹಾಸಾಗರದಿಂದಾಯ್ದು ಪೋಣಿಸಿದ ಕೃಷ್ಣಭಕ್ತಿಪುರಸ್ಸರವಾದ ನುಡಿಮುತ್ತುಗಳಿಂದಾದ ಕೃತಿಸಂಗ್ರಹಮಾಲೆಯನ್ನು ಓದಿ ತಮ್ಮ ಮುಂದೆ ಹೇಳುತ್ತೇನೆ.

*ಮುಪ್ಪುರಿಗೊಂಡ ಜಂಜಡದಿಂದ ಈ ಎಲ್ಲ ಜೀವಜಾತ ಬೆಂದು ನೋಯುತ್ತಿದೆ. ಈ ನೋವು ನೀಗಲೆಂದು, ಈ ಜೀವಜಾತದ ನೆಮ್ಮದಿಗೆಂದು ಕೃಷ್ಣನೆಂಬ ಸೊದೆಯ ಹೆಗ್ಗಡಲನ್ನು ನುಡಿಯಲ್ಲಿ ಸೆರೆಹಿಡಿಯುತ್ತಿದ್ದೇನೆ.

ಈ ಶ್ಲೋಕದ ಪೂರ್ವಾಧ ವಿಷ್ಣುಪುರಾಣ (೧.೧೭.೭೦)ದಲ್ಲಿದೆ. ತಾಪಗಳು ೩ ಬಗೆ (ತಾಪ-ತ್ರಯ)— ಆಧಿಭೌತಿಕ (ಪರಿಸರದಿಂದಾಗುವ ತೊಂದರೆ / ಈತಿಬಾಧೆ / ಶತ್ರುಕೃತ), ಆಧ್ಯಾತ್ಮಿಕ (ದೈಹಿಕವಾದ ತೊಂದರೆ / ವ್ಯಾಧಿ / ಸ್ವಕೃತ) ಮತ್ತು ಆಧಿದೈವಿಕ (ದೈವಿಕವಾದ / ಮಾನಸಿಕವಾದ ತೊಂದರೆ / ಆಧಿ / ಮಿತ್ರಕೃತ). ಹಾಗೆಯೇ, ಭೂತ, ವರ್ತಮಾನ, ಭವಿಷ್ಯದ ತಾಪಗಳೂ ತಾಪತ್ರಯವೇ.*  (—*ಬನ್ನಂಜೆ)

२) हरिपूजायाः महिमा

ते नराः पशवो लोके किं तेषां जीवने फलम् ।
यैर्न लब्धा हरेर्दीक्षा नार्चितो वा जनार्दनः ॥ ३ ॥


೨) ಹರಿಪೂಜೆಯ ಮಹಿಮೆ

ತೇ ನರಾಃ ಪಶವೋ ಲೋಕೇ ಕಿಂ ತೇಷಾಂ ಜೀವನೇ ಫಲಮ್ ।
ಯೈರ್ನ ಲಬ್ಧಾ ಹರೇರ್ದೀಕ್ಷಾ ನಾರ್ಚಿತೋ ವಾ ಜನಾರ್ದನಃ ॥ ೩ ॥

ಯಾರಿಂದ ಹರಿಯ (ಹರಿನಾಮದ, ಹರಿಪೂಜೆಯ, ಭಗವದುಪಾಸನೆಯ) ದೀಕ್ಷೆ (ಉಪದೇಶ, ವ್ರತ, ನಿಯಮ, ದಿನಚರಿ, ದೈನಂದಿನ ಆಚರಣೆ, ನಿತ್ಯಾನುಷ್ಠಾನ) ಪಡೆಯಲ್ಪಟ್ಟಿಲ್ಲವೋ ಅಥವಾ ಜನಾರ್ದನನು (ದುಷ್ಟಜನರ ಮರ್ದನ ಮಾಡುವವನು) ಅರ್ಚಿಸಲ್ಪಟ್ಟಿಲ್ಲವೋ ಅಂತಹ ಮನುಷ್ಯರು ಲೋಕದಲ್ಲಿ (ನರರೂಪದ) ಪಶುಗಳೇ ಸರಿ! (ಗೊತ್ತುಗುರಿ ಇಲ್ಲದ) ಅವರ ಜೀವನದಲ್ಲಿ (ಬದುಕಿಗೆ) ಏನು ಫಲವಿದೆ (ಸಾರ್ಥಕತೆಯಿದೆ) ?

*ಹರಿಯ ದೀಕ್ಷೆಯ ತೊಡದವರು, ಜನಾರ್ದನನನ್ನು ಪೂಜಿಸದವರು, ಅಂಥ ಜನರು ಮನುಷ್ಯರೂಪದ ಪಶುಗಳು! ಅವರ ಬದುಕಿಗೆ ಏನು ಗುರಿ?

ಮೊದಲನೆಯ ಶ್ಲೋಕದಲ್ಲಿ ಬಂದ ಉಪಾಸನೆಯ ೬ ಹಂತಗಳಲ್ಲಿ ಮೊದಲನೆಯದು ಅರ್ಚನ. ಈ ೩ನೆಯ ಶ್ಲೋಕದಿಂದ ೩೩ರ ವರೆಗಿನ ೩೧ ಶ್ಲೋಕಗಳು ಅರ್ಚನೆಯ ಮಹತ್ತ್ವವನ್ನು ಸಾರುವ ಪ್ರಮಾಣ ವಚನಗಳು.* (—*ಬನ್ನಂಜೆ)


संसारेऽस्मिन् महाघोरे जन्मरोगभयाकुले ।
अयमेको महाभागः पूज्यते यदधोक्षजः ॥ ४ ॥


ಜನನ, ರೋಗ, ಭಯಗಳ ಸಂಕುಲವಾದ ಈ ಮಹಾಘೋರವಾದ ಬದುಕಿನಲ್ಲಿ, ಅಧೋಕ್ಷಜನು  / ವಿಷ್ಣುವು ಪೂಜಿಸಲ್ಪಡುತ್ತಾನೆಂಬುದೊಂದೇ ದೊಡ್ಡ ಭಾಗ್ಯವು. ಬೇರೆಲ್ಲವೂ ದೌರ್ಭಾಗ್ಯವೆಂದು ತಾತ್ಪರ್ಯ.


(अधोक्षजः— 
१) "अधोभूते ह्यक्षगणे प्रत्यग्रूपप्रवाहिते ।
 जायते तस्य विज्ञानं तेनाधोक्षज उच्यते ॥"
— अधोभूते स्वस्वविषयेभ्यो निवर्तनेन प्रत्यक्प्रवाहिते अक्षगणे जायते प्रकाशते प्रज्ञानरूपेण इति ।


२) "द्यौरक्षं पृथिवी चाधस्तयोर्यस्मादजायत ।
 मध्ये वैराजरूपेण ततोऽधोक्षज इष्यते ॥" इति विष्णुसहस्रनामभाष्ये,


३) तथा च अण्ड-कपाल-द्वयमध्ये विराड्रूपेण जातत्वादस्य तथात्वम् । ("ईश्वरः सर्वभूतानां हृद्देशेऽर्जुन तिष्ठति " — भगवद्गीता )


४) "अधो न क्षीयते जातु यस्मात्तस्मादधोक्षजः "— महाभारते उद्योगपर्वणि (१३.२.८२) ।
अधोऽधो न क्षयत्यस्मात् संसारेऽलिप्त एव हि । 
अधोक्षज इति ख्यातो विष्णुरच्युत उच्यते ॥
 इत्यर्थमाह ।


५) अधः कृतम् इन्द्रियज्ञानं येन सः ।


६) यस्यानुग्रहमात्रेण भक्तोऽधोगतिरिष्यते ।
 न कदापि स विष्णुस्तु ह्यधोक्षज इतीरितः ॥


७) "अकारो लयवाचि स्यात् धोक्षत्वं स्थितिरुच्यते ।
जकारो जन्मवाचि स्यादधोक्षजो हरिः स्मृतः ॥"


८) "अधोक्षो ब्रह्मपायुश्च सृष्ट्यादौ विष्णुरेव हि । 
परीक्षार्थं जायतेऽस्मादिवाधोक्षज ईरितः ॥" )


(ಅಧೋಕ್ಷಜ— 
೧) "ಒಳಮುಖದಲಿಂದ್ರಿಯಗಳೋಡಲು |
      ಪರಮ ವಿಜ್ಞಾನವದು ಮೂಡಲು |
      ಪರಮಬೊಮ್ಮದ ತಿಳಿವಧೋಕ್ಷಜನಾಮವಾಂತಿಹುದು ||" 
—ಇಂದ್ರಿಯಗಳು ಆಯಾ ವಿಷಯಗಳಿಂದ ಹಿಮ್ಮೆಟ್ಟಿ ಅಂತರ್ಮುಖವಾಗಿ ನಿರಂತರ ಪ್ರವಹಿಸಿದಾಗ ಉಂಟಾಗುವ ಪ್ರಜ್ಞಾನಜ್ಯೋತಿಯ ಪ್ರಕಾಶವೇ ಅಧೋಕ್ಷಜವೆನಿಸಿದೆ.


೨) "ಅಂತರಿಕ್ಷವೆ ಅಕ್ಷ ಪೃಥಿವಿಯ |
      ದಂತೆಯೇ ಅಧವೆಂದು ತಿಳಿಯಲು |
     ಅಂತರದಿ ವೈರಾಜನುದಯಿಸಿ ತಾನಧೋಕ್ಷಜನು ||"
ಎಂದಿದೆ ವಿಷ್ಣುಸಹಸ್ರನಾಮಭಾಷ್ಯದಲ್ಲಿ.


೩) ಹಾಗೆಯೇ, ವೃಷಣ-ತಲೆಬುರುಡೆಗಳ ನಡುವಿನ ದೇಹದಲ್ಲಿ ವಿರಾಟ್ಪುರುಷನಾಗಿ ಹುಟ್ಟಿದ್ದರಿಂದ ("ಈಶ್ವರನು ಸಕಲ ಚರಾಚರಗಳ ಹೃದಯ / ಮಧ್ಯಭಾಗದಲ್ಲಿ ನೆಲೆಯಾಗಿರುವನು"— ಭಗವದ್ಗೀತಾ )


೪) "ಕೆಳಕೆಳಗೆ ತಾ ಪತನಹೊಂದದೆ |
      ಬೆಳವಣಿಗೆಯೂ ತನಗೆ ಇಲ್ಲದೆ |
      ಕಳವಳಿಸದಿಹ ಹರಿಯಧೋಕ್ಷಜನೆಂದನಾ ವ್ಯಾಸ ||"
(—ಮಹಾಭಾರತದ ಉದ್ಯೋಗಪರ್ವದಲ್ಲಿ ೧೩.೨.೮೨)
      ಈಗಿರುವ ಪದದಿಂದಲಿಳಿಯದೆ |
      ಲೋಗರೊಳು ತಾನಂಟಿಕೊಳ್ಳದೆ |
      ಯೋಗಭೋಗಸಮತ್ವನಚ್ಯುತ ತಾನಧೋಕ್ಷಜನು ||
ಎಂಬರ್ಥವನ್ನು ಹೇಳಿದೆ.


೫) ಇಂದ್ರಿಯಗಳಿಂದಾದ ಬಾಹ್ಯವಿಷಯಜ್ಞಾನವನ್ನು ತುಚ್ಛೀಕರಿಸಿದವನು ಯಾವನೋ ಅವನು.


೬) ಯಾರನುಗ್ರಹಮಾತ್ರದಿಂದಲ |
    ಪಾರ ಲೋಕದಿ ಪತನಗೊಳ್ಳನೊ |
    ಆ ರಮಾವಲ್ಲಭನೆ ವಿಷ್ಣುವೆ ತಾನಧೋಕ್ಷಜನು ||


೭) ಅಕಾರವು ಲಯಸೂಚಿ ಧೋಕ್ಷ |
    ಪ್ರಕಾರ ಸ್ಥಿತಿವಾಚಿ ಹರಹರಿ |
    ಜಕಾರವದಜವಾಚಿ ಸೇರಲು ತಾನಧೋಕ್ಷನು ||


೮) ಅಕ್ಷವಿಂದ್ರಿಯ ಅಧವು ಕೆಳಗಿನ |
     ಪಕ್ಷದಲಿ ಗುದ ಕರ್ಮಕರಣವು |
     ಸಕ್ಷಮನು ತಾ ಹರಿಯು ಚರಿಸಲು ನಿಖಿಲಲೋಕವನು ||
     ಅಧೋಕ್ಷವು ತಾನಜನ ಗುದ ತಾ |
     ಪರೀಕ್ಷಕ ಹರಿ ಸೃಷ್ಟಿಸಮಯದಿ |
     ಯಧೋಕ್ಷದ್ವಾರದಲಿ ಹೊರಬರೆ ತಾನಧೋಕ್ಷಜನು || )

स नाम सुकृती लोके कुलं तेन ह्यलङ्कृतम् ।
आधारः सर्वभूतानां येन विष्णुः प्रसादितः ॥ ५ ॥

सर्वभूतानाम् आधारः विष्णुः येन प्रसादितः तेन (स्व)कुलं हि अलङ्कृतम् ; लोके सु-कृती नाम सः (एव) ॥

ಸ ನಾಮ ಸುಕೃತೀ ಲೋಕೇ ಕುಲಂ ತೇನ ಹ್ಯಲಂಕೃತಮ್ |
ಆಧಾರಃ ಸರ್ವಭೂತಾನಾಂ ಯೇನ ವಿಷ್ಣುಃ ಪ್ರಸಾದಿತಃ || ೫ ||


ಸಕಲ ಜೀವರಿಗೂ ಆಸರೆಯಾದ ವಿಷ್ಣುವು ಯಾವನಿಂದ ಒಲಿಸಿಕೊಳ್ಳಲ್ಪಡುವನೋ ಅಂಥವನಿಂದ ವಂಶಕ್ಕೇ ಅಲಂಕಾರ; ಲೋಕದಲ್ಲಿ ಭಾಗ್ಯವಂತನೆಂದರೆ (ಪುಣ್ಯವಂತನೆಂದರೆ, ಅದೃಷ್ಟಶಾಲಿಯೆಂದರೆ) ಅವನೇ.

ಆತನೇ ಸುಕೃತಿಯಲ ಲೋಕದೊ
ಳಾತನೇ ಕುಲದೀಪಕನು ಮಿಗೆ
ಯಾತನದೆ ಸಾರ್ಥಕವು ಜೀವನ ಪಾತಕವ ಕಳೆದು |
ಕಾತರದಿ ಶ್ರೀಹರಿಯ ಪೂಜಿಸಿ
ಯಾತರದಿ ತಾನೊಲಿಸಿಯವನನು
ಭೂತವೆಲ್ಲದರಾಧಿಪತಿ ಸರ್ವೇಶನನು ತಾನು ||


यज्ञानां तपसां चैव शुभानां चैव कर्मणाम् ।
तद्विशिष्टफलं नॄणां सदैवाराधनं हरेः ॥ ६ ॥


(नानाविधानां) यज्ञानां तपसां चैव (तथा), (बहूनां) शुभानां (पुण्यानां) कर्मणां (यत्फलं प्राप्यते) तद्- (ततः, तस्मात्) -विशिष्टं (अतिरिक्तं, महत्तरं) फलं (फलदं) नॄणां (नराणां), (किमिति चेत्), सदा (सततं, निरन्तरं) हरेः (विश्वव्यापकस्य विष्णोः, षड्गुणवतः भगवतः, जगतः परमेश्वरस्य, सर्वभूतस्थान्तरात्मरूपिणः परमात्मनः, सर्वमूलस्य परतत्त्वस्य, सर्वाधारस्य सूक्ष्मस्थूलातीतपरब्रह्मवस्तुनः) आराधनम् (उपासना, स्तुतिः, ध्यानम्, सेवा, प्रपत्तिः, अर्चनं, वन्दनं, दास्यं, सख्यम्, लीलाश्रवण-कीर्तन-मनन-निदिध्यासनादयः) एव ॥


ಯಜ್ಞಾನಾಂ ತಪಸಾಂ ಚೈವ ಶುಭಾನಾಂ ಚೈವ ಕರ್ಮಣಾಮ್ |
ತದ್ವಿಶಿಷ್ಟಫಲಂ ನೄಣಾಂ ಸದೈವಾರಾಧನಂ ಹರೇಃ || ೬ ||


(ನಾನಾವಿಧಗಳಾದ) ಯಜ್ಞಗಳಿಂದ, ತಪಸ್ಸುಗಳಿಂದ, ಹಾಗೆಯೇ (ಬಹಳಷ್ಟು) ಶುಭಕರವಾದ (ಪುಣ್ಯಕರವಾದ) ಕರ್ಮಗಳಿಂದ (ಯಾವ ಫಲವು ಪ್ರಾಪ್ತವಾಗುತ್ತದೋ), ಅದಕ್ಕಿಂತ ವಿಶಿಷ್ಟವಾದ (ಮೀರಿದ, ಹೆಚ್ಚಿನದಾದ) ಫಲವು (ಫಲವನ್ನೀಯುವಂಥದ್ದು) ಮನುಷ್ಯರಿಗೆ (ಯಾವುದೆಂದರೆ), ಯಾವಾಗಲೂ / ಸದಾ (ಸತತವೂ, ನಿರಂತರವೂ / ಅಂತರವಿಲ್ಲದಂತೆ ಎಡೆಬಿಡದೆ), ಶ್ರೀಹರಿಯ (ವಿಶ್ವವ್ಯಾಪಕನಾದ ವಿಷ್ಣುವಿನ, ಷಡ್ಗುಣವಂತನಾದ ಭಗವಂತನ, ಜಗತ್ತಿನ ಪರಮ-ಈಶ್ವರನಾದ, ಸಕಲ ಚರಾಚರಗಳೊಳಗಿರುವ ಅಂತರಾತ್ಮರೂಪಿಯಾದ ಪರಮಾತ್ಮನ, ಎಲ್ಲಕ್ಕೂ ಮೂಲವಾದ ಪರತತ್ತ್ವದ, ಎಲ್ಲಕ್ಕೂ ಆಧಾರವಾದ ಸೂಕ್ಷ್ಮ-ಸ್ಥೂಲಾತಿರಿಕ್ತವಾದ ಪರಬ್ರಹ್ಮವಸ್ತುವಿನ), ಆರಾಧನೆಯೇ (ಉಪಾಸನೆಯೇ, ಸ್ತುತಿಯೇ, ಧ್ಯಾನವೇ, ಸೇವೆಯೇ, ಶರಣಾಗತಿಯೇ, ಅರ್ಚನೆಯೇ, ವಂದನೆಯೇ, ದಾಸ್ಯವೇ, ಸಖ್ಯವೇ, ಲೀಲಾಶ್ರವಣ-ಕೀರ್ತನ-ಮನನ-ನಿದಿಧ್ಯಾಸನಾದಿಗಳೇ) ಆಗಿರುವುದು.


ಬಹುತರದ ಯಜ್ಞಗಳ ನಡೆಸುತ
ಬಹುವಿಧದ ತಪವನ್ನು ಗೈಯುತ
ಬಹುವಾಗಿ ಶುಭಕರ್ಮಗೈವುದರಿಂದ ಯಾವ ಫಲ |
ಬಹುದೆಲ್ಲವಿದಕಿಂತ ಹೆಚ್ಚಿಗೆ
ಬಹುವಿಧದ ಭಕುತಿಯೊಳು ಮಾಡುವ
ಬಹುಜನೇಡ್ಯನ ಹರಿಯ ಪರತತ್ತ್ವಾರ್ಥ ಪೂಜನವು ||


Comments

Popular posts from this blog

ಸಂಸ್ಕೃತಶಬ್ದವ್ಯುತ್ಪತ್ತಿ-ಪರ್ಯಾಯಪದ-ಕೋಶಃ (ಸಂಸ್ಕೃತ-ಸಂಸ್ಕೃತ-ಕನ್ನಡ)

ಬ್ರಾಹ್ಮಣ್ಯ ೫

ಶ್ರೀನಾರಾಯಣಶತಕಮ್