ಕೃಷ್ಣಾಷ್ಟಮಿ 2019-20
ಕೃಷ್ಣಾಷ್ಟಮಿ 2019-20
॥ ॐ नमो भगवते वासुदेवाय ॥
ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಮಷ್ಟಾದಶಾಧ್ಯಾಯಿನೀಮ್
ಅಂಬ! ತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ || ೧ ||
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || ೨ ||
ಅಷ್ಟಾದಶಪುರಾಣಾನಿ ನವವ್ಯಾಕರಣಾನಿ ಚ |
ನಿರ್ಮಥ್ಯ ಚತುರೋ ವೇದಾನ್ ಮುನಿನಾ ಭಾರತಂ ಕೃತಮ್ || ೩ ||
ಭಾರತೋದಧಿನಿರ್ಮಥ್ಯ ಗೀತಾನಿರ್ಮಥಿತಸ್ಯ ಚ |
ಸಾರಮುದ್ಧೃತ್ಯ ಕೃಷ್ಣೇನ ಅರ್ಜುನಸ್ಯ ಮುಖೇ ಧೃತಮ್ || ೪ ||
ಮಲನಿರ್ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ |
ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್ || ೫ ||
ಗೀತಾಶ್ರಯೇऽಹಂ ತಿಷ್ಠಾಮಿ ಗೀತಾ ಮೇ ಚೋತ್ತಮಂ ಗೃಹಮ್ |
ಗೀತಾಜ್ಞಾನಮುಪಾಶ್ರಿತ್ಯ ತ್ರೀಂಲೋಕಾನ್ ಪಾಲಯಾಮ್ಯಹಮ್ || ೬ ||
ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ |
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ || ೭ ||
ಆಪದಂ ನರಕಂ ಘೋರಂ ಗೀತಾಧ್ಯಾಯೀ ನ ಪಶ್ಯತಿ |
ನಿತ್ಯಂ ಧಾರಯತೇ ಯಸ್ತು ಸ ಮೋಕ್ಷಮಧಿಗಚ್ಛತಿ || ೮ ||
ಗೀತಾಮಾಹಾತ್ಮ್ಯವನ್ನು ವಾರಾಹಪುರಾಣ, ಸ್ಕಾಂದಪುರಾಣ, ಮಹಾಭಾರತ, ವೈಷ್ಣವೀಯ ತಂತ್ರಸಾರ, ಶಂಕರಾದಿ ಆಚಾರ್ಯರು, ಮಹಾತ್ಮರು— ಮುಂತಾದವರಿಂದ ಪ್ರಶಂಸಿತವಾಗಿದೆ. ಪದ್ಮಪುರಾಣದಲ್ಲಂತೂ ಗೀತೆಯ ೧೮ ಅಧ್ಯಾಯಗಳಿಗೂ ಪ್ರತ್ಯೇಕವಾಗಿ ೧೮ ಅಧ್ಯಾಯಗಳ ರೂಪವಾಗಿ ಗೀತಾಮಾಹಾತ್ಮ್ಯವು ದೃಷ್ಟಾಂತ-ಕಥೆಯ ರೂಪದಲ್ಲಿ ನಿರೂಪಿತವಾಗಿದೆ.
೧) ಅರ್ಜುನ-ವಿಷಾದಯೋಗ— (ಅರ್ಜುನನಿಗೆ ಯುದ್ಧವು ಬೇಡವೆನಿಸಿದ್ದು)(ಎರಡೂ ಸೇನೆಗಳ ಮುಖ್ಯ ಮುಖ್ಯರ ಪರಿಚಯ, ಸಾಮರ್ಥ್ಯ, ಶಂಖಧ್ವನಿಪರಿಣಾಮ, ಅರ್ಜುನನು ಸೈನ್ಯವನ್ನು ನೋಡಿ, ಸ್ವಜನವ್ಯಾಮೋಹ, ಕ್ಲೈಬ್ಯ, ಶೋಕಗಳನ್ನು ತೋರಿ ರಥದಲ್ಲೇ ಕುಸಿದದ್ದು)
- ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ, ಯುಯುತ್ಸವಃ |
ಮಾಮಕಾಃ ಪಾಂಡವಾಃ, ಚ, ಏವ ಕಿಮ್, ಅಕುರ್ವತ ಸಂಜಯ || ೧ ||
(ಜಾಮದಗ್ನ್ಯ ಭಾರ್ಗವರಾಮನಿಂದ ದುಷ್ಟಕ್ಷತ್ರಿಯರುಧಿರಪೂರಿತ ೫ ಬೃಹತ್ ಸರೋವರ ನಿರ್ಮಾಣ— ಸಮಂತಪಂಚಕ; ಧರ್ಮಕ್ಷೇತ್ರ; ಚಂದ್ರವಂಶೀಯ ಕುರುಮಹಾರಾಜನಿಂದ ಇಲ್ಲೇ ಬಹುವಾಗಿ ತಪಗೈಯಲ್ಪಟ್ಟಿತ್ತು— ಇಲ್ಲಿ ಹೋರಾಡಿ ಮಡಿದ ಕ್ಷತ್ರಿಯರಿಗೆ ವೈಕುಂಠಪ್ರಾಪ್ತಿಯೆಂಬ ಪ್ರತೀತಿ; ದ್ವಾದಶಯೋಜನವಿಸ್ತಾರ; ಬ್ರಹ್ಮರ್ಷಿದೇಶ— ಮನುಸ್ಮೃತಿ)
- ಕೌರವನಿಂದ ಗುರು ದ್ರೋಣಾಚಾರ್ಯರಿಗೆ ಉಭಯ ಸೇನೆಗಳ, ಸೇನಾಧಿಪತಿಗಳ ವಿವರಣೆ (ಮದರ್ಥೇ ತ್ಯಕ್ತಜೀವಿತಾಃ || ೯ ||)
- ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ |
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ || ೧೦ ||
- ಇತ್ತಂಡಗಳ ಶಂಖ-ಭೇರಿ-ಪಣವ-ಆನಕ-ಗೋಮುಖ-ದುಂದುಭಿ ಇತ್ಯಾದಿ ರಣವಾದ್ಯಗಳ ಘೋಷತುಮುಲ.
- ತತಃ ಶ್ವೇತಹಯೈರ್ಯುಕ್ತೇ(೧೪) (ಅರ್ಜುನ— ಶ್ವೇತವರ್ಣ, ಶ್ವೇತವಾಜೀ, ಶ್ವೇತವಾಹನ, ಶ್ವೇತಶಂಖ— ದೇವದತ್ತ);
- ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ |
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ (೧೫)
ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ |
ನಕುಲಃ ಸಹದೇವಶ್ಚ ಸುಘೋಷ-ಮಣಿಪುಷ್ಪಕೌ (೧೬)
- ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ |
- ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇऽಚ್ಯುತ | ಯಾವದೇತಾನ್ ನಿರೀಕ್ಷೇ ಅಹಮ್...ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃ ಯುದ್ಧೇ ಪ್ರಿಯಚಿಕೀರ್ಷವಃ |
- ಉವಾಚ ಪಾರ್ಥ ಪಶ್ಯ ಏತಾನ್ ಸಮವೇತಾನ್ ಕುರೂನ್ ಇತಿ |
- ಕೃಪಯಾ ಪರಯಾವಿಷ್ಟೋ ವಿಷೀದನ್ ಇದಮ್ ಅಬ್ರವೀತ್ |
- ದೃಷ್ಟ್ವಾ ಇಮಂ ಸ್ವಜನಂ..ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ | ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ||
- ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಚೈವ ಪರಿದಹ್ಯತೇ |
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ||
- ಅಪಶಕುನಗಳು...ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ | ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ || ಯೇಷಾಮರ್ಥೇ ಕಾಂಕ್ಷಿತಂ...ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ...ಏತಾನ್ ನ ಹಂತುಮಿಚ್ಛಾಮಿ ಘ್ನತೋऽಪಿ ಮಧುಸೂದನ | ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ..ಪಾಪಮೇವಾಶ್ರಯೇದಸ್ಮಾನ್...ಕುಲಕ್ಷಯದೋಷ, ಮಿತ್ರದ್ರೋಹಪಾತಕ. ಸನಾತನ ಕುಲಧರ್ಮನಾಶ, ಅಧರ್ಮ ತಾಂಡವ, ಕುಲಸ್ತ್ರೀತ್ವನಾಶ, ವರ್ಣಸಂಕರ, ಕೊಂದವರಿಗೂ ಸತ್ತವರಿಗೂ ನರಕ, ಲುಪ್ತಪಿಂಡೋದಕಕ್ರಿಯಾಃ ಪತಂತಿ ಪಿತರಃ | ಉತ್ಸಾದ್ಯಂತೇ ಜಾತಿಧರ್ಮಾಃ…
- ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ |
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ || ೪೭ || ]
೨) ಸಾಂಖ್ಯಯೋಗ— (ಆತ್ಮನ ಸ್ವರೂಪ, ಕ್ಷಾತ್ರಧರ್ಮಾನುಸಾರ ಯುದ್ಧದ ಅನಿವಾರ್ಯತೆ, ಕರ್ಮಯೋಗವಿಚಾರ, ಸ್ಥಿತಪ್ರಜ್ಞನ ಲಕ್ಷಣ ಹಾಗೂ ಮಹಿಮೆ)
- ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನ ಏತತ್ ತ್ವಯಿ ಉಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವಾ ಉತ್ತಿಷ್ಠ ಪರಂತಪ || ೩ ||
- ಅಶೋಚ್ಯಾನ್ ಅನು-ಅಶೋಚಃ ತ್ವಂ ಪ್ರಜ್ಞಾವಾದಾನ್, ಚ ಭಾಷಸೇ |
ಗತ-ಅಸೂನ್ ಅಗತ-ಅಸೂನ್ ಚ ನ ಅನು-ಶೋಚಂತಿ ಪಂಡಿತಾಃ || ೧೧ ||
- ಅಂತವಂತಃ, ಇಮೇ ದೇಹಾಃ, ನಿತ್ಯಸ್ಯ, ಉಕ್ತಾಃ ಶರೀರಿಣಃ |
ಅನಾಶಿನಃ ಅಪ್ರಮೇಯಸ್ಯ ತಸ್ಮಾತ್, ಯುಧ್ಯಸ್ವ ಭಾರತ || ೧೮ ||
- ಯ ಏನಂ ವೇತ್ತಿ ಹಂತಾರಂ ಯಃ ಚ ಏನಂ ಮನ್ಯತೇ ಹತಮ್ |
ಉಭೌ ತೌ ನ ವಿಜಾನೀತಃ ನ, ಅಯಂ ಹಂತಿ ನ ಹನ್ಯತೇ || ೧೯ ||
- ವೇದ, ಅವಿನಾಶಿನಂ ನಿತ್ಯಂ ಯಃ, ಏನಮ್ ಅಜಮ್ ಅವ್ಯಯಮ್ |
ಕಥಂ ಸಃ, ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ || ೨೧ ||
- ಜಾತಸ್ಯ ಹಿ ಧ್ರುವಃ, ಮೃತ್ಯುಃ, ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾತ್, ಅಪರಿಹಾರ್ಯೇ ಅರ್ಥೇ ನ ತ್ವಂ ಶೋಚಿತುಮ್ ಅರ್ಹಸಿ || ೨೭ ||
- ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್, ಅರ್ಹತಿ |
ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ, ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ || ೩೧ ||
- ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ |
ತಸ್ಮಾತ್, ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ-ನಿಶ್ಚಯಃ || ೩೭ ||
- ಸುಖದುಃಖೇ ಸಮೇ ಕೃತ್ವಾ ಲಾಭ-ಅಲಾಭೌ ಜಯ-ಅಜಯೌ |
ತತಃ, ಯುದ್ಧಾಯ ಯುಜ್ಯಸ್ವ ನ, ಏವಂ ಪಾಪಮ್, ಅವಾಪ್ಸ್ಯಸಿ || ೩೮ ||
- ಕರ್ಮಣ್ಯೇ ವಾ ಅಧಿಕಾರಃ ತೇ ಮಾಫಲೇಷು ಕದಾಚನ |
ಮಾ ಕರ್ಮಫಲಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ || ೪೭ ||
- ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಿದ್ಧಿ-ಅಸಿದ್ಧ್ಯೋಃ ಸಮಃ ಭೂತ್ವಾ ಸಮತ್ವಂ ಯೋಗ ಉಚ್ಯತೇ || ೪೮ ||
- ಬುದ್ಧಿಯುಕ್ತಃ ಜಹಾತಿ ಇಹ ಉಭೇ ಸುಕೃತ-ದುಷ್ಕೃತೇ |
ತಸ್ಮಾತ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ || ೫೦ ||
- ಕರ್ಮಜಂ ಬುದ್ಧಿಯುಕ್ತಾಃ, ಹಿ ಫಲಂ ತ್ಯಕ್ತ್ವಾ ಮನೀಷಿಣಃ |
ಜನ್ಮಬಂಧ-ವಿನಿರ್ಮುಕ್ತಾಃ ಪದಂ ಗಚ್ಛಂತಿ, ಅನಾಮಯಮ್ || ೫೧ ||
೩) ಕರ್ಮಯೋಗ— (ಕರ್ಮವು ಜ್ಞಾನಕ್ಕೆ ಸಾಧನ, ಅನಾಸಕ್ತಿಯೋಗ, ಯಜ್ಞ-ದಾನ-ತಪಸ್ಸುಗಳ ಕರ್ತವ್ಯತೆ, ಜ್ಞಾನಿ ಹಾಗೂ ಭಗವಂತ ಲೋಕಸಂಗ್ರಹಾರ್ಥ ಕರ್ಮ ಮಾಡುವುದರ ಅಗತ್ಯತೆ, ಅಜ್ಞಾನಿ-ಜ್ಞಾನಿಗಳ ಲಕ್ಷಣಗಳು, ರಾಗ-ದ್ವೇಷರಹಿತನಾಗಿ ಕರ್ಮಮಾಡಲು ಪ್ರೇರಣೆ, ಕಾಮವೆಂಬ ನಿತ್ಯವೈರಿಯನ್ನು ಗೆಲ್ಲುವಿಕೆ)
- ಲೋಕೇऽಸ್ಮಿನ್ ದ್ವಿವಿಧಾ ನಿಷ್ಠಾ— ಮುಕ್ತಿಪಥವು ೨ ಬಗೆ— ಸಾಂಖ್ಯರ ಜ್ಞಾನಯೋಗ (ನಿವೃತ್ತಿಮಾರ್ಗ), ಯೋಗಿಗಳ ಕರ್ಮಯೋಗ(ಪ್ರವೃತ್ತಿಮಾರ್ಗ). ಕರ್ಮಗಳನ್ನು ಆರಂಭಿಸದಿದ್ದಕೂಡಲೇ ಮುಕ್ತಿಯಾಗದು; ಕೇವಲ ಸಂನ್ಯಾಸದಿಂದಲೂ ನೈಷ್ಕರ್ಮ್ಯಸಿದ್ಧಿಯಾಗದು. ಕೇವಲ ಜಡಭರತ, ಸದಾಶಿವಬ್ರಹ್ಮೇಂದ್ರರು, ರಾಮಕೃಷ್ಣ ಪರಮಹಂಸರಂಥ ಬ್ರಹ್ಮಜ್ಞಾನಿಗಳಾದ ಕೆಲವರಿಗೆ ಮಾತ್ರ ಲೋಕವ್ಯವಹಾರದಂತಹ ಸ್ವಕೃತಕರ್ಮದ ಅವಶ್ಯಕತೆ ಇರಲಿಲ್ಲ. ಆದರೂ ಉಸಿರಾಟ, ಹೃದಯಬಡಿತದಂತಹ ಪ್ರಾಕೃತಕರ್ಮವು ಅನುಕ್ಷಣವೂ ಸಹಜವಾಗಿಯೇ ಆಗುತ್ತಿರುತ್ತದೆ.
- ನ ಹಿ ಕಶ್ಚಿತ್ ಕ್ಷಣಮ್, ಅಪಿ ಜಾತು ತಿಷ್ಠತಿ, ಅಕರ್ಮಕೃತ್ |
ಕಾರ್ಯತೇ ಹಿ, ಅವಶಃ ಕರ್ಮ ಸರ್ವಃ ಪ್ರಕೃತಿಜೈಃ, ಗುಣೈಃ || ೫ ||
- ಕರ್ಮೇಂದ್ರಿಯಾಣಿ ಸಂಯಮ್ಯ ಯಃ, ಆಸ್ತೇ ಮನಸಾ ಸ್ಮರನ್ |
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸಃ, ಉಚ್ಯತೇ || ೬ ||
- ಅನಾಸಕ್ತಿಯೋಗವು ಶ್ರೇಷ್ಠವಾದುದು. ಮನಸ್ಸಿನಿಂದ ಇಂದ್ರಿಯಗಳನ್ನು ನಿಗ್ರಹಿಸಿ ಯಾವುದೇ ಫಲಾಸಕ್ತಿಯಿಲ್ಲದೆ,
ಕರ್ಮಗೈದು, ದೊರೆತದ್ದರಲ್ಲಿ ತೃಪ್ತಿಹೊಂದುವುದೇ ಅನಾಸಕ್ತಿಯೋಗ.
- ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹಿ-ಅಕರ್ಮಣಃ |
ಶರೀರಯಾತ್ರಾ ಅಪಿ ಚ ತೇ ನ ಪ್ರಸಿದ್ಧ್ಯೇತ್ ಅಕರ್ಮಣಃ || ೮ ||
೪) ಜ್ಞಾನಕರ್ಮಸಂನ್ಯಾಸಯೋಗ— (ಜ್ಞಾನಿಯು ಮಾಡಿದರೂ ಮಾಡಿದ ಹಾಗಲ್ಲ— ಈ ಯೋಗಪರಂಪರೆ > ಭಗವಂತ > ವಿವಸ್ವಾನ್ > ವೈವಸ್ವತ ಮನು > ಇಕ್ಷ್ವಾಕು > ರಾಜರ್ಷಿಗಳು > ನಷ್ಟಪ್ರಾಯವಾದುದು, ಧರ್ಮದ ಅವನತಿಯಾದಾಗ ದುಷ್ಟಶಿಕ್ಷಣ-ಶಿಷ್ಟರಕ್ಷಣಕ್ಕಾಗಿ ಯುಗಯುಗದಲ್ಲೂ ಜನನ-ಮರಣ-ರಹಿತನಾದ ಭಗವಂತನ ಅವತಾರ, ಕರ್ಮ ಮಾಡುವಿಕೆಯು ೩ ಬಗೆ— ಕರ್ತವ್ಯಕರ್ಮ / ಕರ್ಮ (ಮಾಡಬೇಕಾದ್ದನ್ನು ಮಾಡುವುದು), ಅಕರ್ಮ (ಕರ್ಮವನ್ನೇ ಮಾಡದಿರುವಿಕೆ), ಹಾಗೂ ವಿಕರ್ಮ (ಮಾಡಬಾರದ್ದನ್ನು ಮಾಡುವುದು), ಗಹನಾ ಕರ್ಮಣೋ ಗತಿಃ, ಕರ್ಮಣಿ ಅಕರ್ಮ ಯಃ ಪಶ್ಯೇತ್ ಸ ಯುಕ್ತಃ, ಕಾಮಸಂಕಲ್ಪವರ್ಜಿತ ಕರ್ಮಕರ್ತೃವಿನ ಕರ್ಮಫಲಗಳೆಲ್ಲ ಜ್ಞಾನಾಗ್ನಿದಗ್ಧವಾಗುವುವು, ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ | ಶಾರೀರಂ ಕೇವಲಂ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ ||
ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ |
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ ||
ಗತಸಂಗ, ಮುಕ್ತ, ಜ್ಞಾನಾವಸ್ಥಿತಚೇತನು ಮಾಡಿದ ಯಜ್ಞರೂಪೀಕರ್ಮವೆಲ್ಲವೂ ಇಲ್ಲವಾಗಿ ಕರ್ಮಾತೀತನಾಗುವನು. ಬ್ರಹ್ಮಾರ್ಪಣಂ….ದ್ರವ್ಯ-ತಪೋ-ಯೋಗ-ಸ್ವಾಧ್ಯಾಯಜ್ಞಾನಯಜ್ಞಗಳು— ಯಜ್ಞಶಿಷ್ಟಾಮೃತಭುಕ್, ದ್ರವ್ಯಯಜ್ಞಕ್ಕಿಂತ ಜ್ಞಾನಯಜ್ಞವು ಮಿಗಿಲು, ನ ಹಿ ಜ್ಞಾನೇನ ಸದೃಶಂ…, ಶ್ರದ್ಧಾವಾನ್ ಲಭತೇ ಜ್ಞಾನಂ.., ಸಂಶಯಾತ್ಮಾ ವಿನಶ್ಯತಿ,
೫) ಕರ್ಮಸಂನ್ಯಾಸಯೋಗ— ಕರ್ಮವನ್ನು ಬಿಡುವುದರ ವಿಚಾರ, ಕರ್ಮಯೋಗಿಯ ಲಕ್ಷಣ-ಮಹಿಮೆಗಳು, ಜ್ಞಾನಯೋಗವಿಚಾರ, ಭಕ್ತಿಸಹಿತ ಧ್ಯಾನಯೋಗದ ವರ್ಣನೆ.
೬) ಆತ್ಮಸಂಯಮ / ಧ್ಯಾನ ಯೋಗ— ಯೋಗಾರೂಢ ಪುರುಷನ ಲಕ್ಷಣ, ಆತ್ಮೋದ್ಧಾರಕ್ಕಾಗಿ ಪ್ರೇರಣೆ, ಭಗತ್ಪ್ರಾಪ್ತ ಪುರುಷನ ಲಕ್ಷಣ, ಧ್ಯಾನವಿಧಾನ, ಮನೋನಿಗ್ರಹ ("ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್ | ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ || ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ | ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ||"), ಯೋಗಭ್ರಷ್ಟನ ಗತಿ("ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಛತಿ || ತಪಸ್ವಿಗಳಿಗಿಂತಲೂ, ಜ್ಞಾನಿಗಳಿಗಿಂತಲೂ, ಕರ್ಮಿಗಳಿಗಿಂತಲೂ ಯೋಗಿಯು ಹೆಚ್ಚಿನವನು. "ತಸ್ಮಾದ್ಯೋಗೀ ಭವ")
೭) ಜ್ಞಾನವಿಜ್ಞಾನಯೋಗ / ಭಗವತ್ಸ್ವರೂಪದ ಅನುಭವ— ಎಲ್ಲದರಲ್ಲೂ ಕಾರಣರೂಪದಿಂದ ಭಗವಂತನ ವ್ಯಾಪಕತೆ, ಆಸುರೀಸ್ವಭಾವದವರ ನಿಂದೆ, ಭಗವದ್ಭಕ್ತರ ಪ್ರಶಂಸೆ, ಅನ್ಯದೇವತೆಗಳ ಉಪಾಸನಾಫಲ, ಭಗವತ್ಪ್ರಭಾವವನ್ನು ತಿಳಿಯದವರ ನಿಂದೆ ಹಾಗೂ ತಿಳಿದವರ ಮಹಿಮೆ.
೮) ಅಕ್ಷರಬ್ರಹ್ಮಯೋಗ / ಓಂಕಾರದ ಧ್ಯಾನ— ಬ್ರಹ್ಮವೆಂದರೆ ನಾಶರಹಿತವಾದ ಪರಬ್ರಹ್ಮ, ಪ್ರತಿದೇಹದಲ್ಲಿಯೂ ಆತ್ಮವಾಗಿರುವುದೇ ಅಧ್ಯಾತ್ಮ, ಎಲ್ಲ ಪ್ರಾಣಿಗಳ ಸೃಷ್ಟಿಗೆ ಕಾರಣವಾದದ್ದೇ ಕರ್ಮ, ಕ್ಷರವಸ್ತುಗಳಾದ (ನಾಶವಾಗುವ) ಪ್ರಾಣಿಗಳೇ ಅಧಿಭೂತ, ಸಮಸ್ತ ಪ್ರಾಣಿಗಳಿಗೆ ಆಧಾರನಾಗಿ ಸೂರ್ಯನಲ್ಲಿರುವ ಹಿರಣ್ಯಗರ್ಭನೇ ಅಧಿದೈವತ, "ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ", "ಈಶ್ವರಃ ಸರ್ವಭೂತಾನಾಂ ಹೃದ್ದೇಶೇऽರ್ಜುನ ತಿಷ್ಠತಿ" ಎಂಬ ಹಾಗೆ ಈ ದೇಹದಲ್ಲಿ ಅಧಿಯಜ್ಞನು ಭಗವಂತನೇ. ಅಂತ್ಯಕಾಲದ ಭಾವ-ಸ್ಮರಣೆಗಳೇ ಪುನರ್ಜನ್ಮ/ಮುಕ್ತಿನಿರ್ಣಾಯಕ. "ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ | ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ||" "ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ | ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||" "ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋऽರ್ಜುನ | ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ||" ಬ್ರಹ್ಮವನ್ನೇ ಧ್ಯಾನಿಸುವವರು ಬೆಳಗುವ ಹಗಲಿನ ದೇವತೆ, ಶುಕ್ಲಪಕ್ಷದ ದೇವತೆ, ಉತ್ತರಾಯಣದ ೬ ತಿಂಗಳ ಅಭಿಮಾನಿದೇವತೆ— ಇವರ ಮಾರ್ಗದಲ್ಲಿ ಗಮಿಸಿ ಪುನರಾವೃತ್ತಿಯಿರದ ಸಗುಣಬ್ರಹ್ಮವನ್ನು ಹೊಂದುವರು. ಕರ್ಮಠರು ಮೊದಲಾದವರು ಸಂಜೆಯ ದೇವತೆ, ಇರುಳಿನ ದೇವತೆ, ಕೃಷ್ಣಪಕ್ಷದ ದೇವತೆಯ ಮಾರ್ಗದಿಂದ ಚಂದ್ರನ ಬೆಳಕುಳ್ಳ ಸ್ವರ್ಗವನ್ನು ಹೊಂದಿ, ಮತ್ತೆ ಹುಟ್ಟುವರು.
೯) ರಾಜವಿದ್ಯಾರಾಜಗುಹ್ಯಯೋಗ— ಜ್ಞಾನದ ಪ್ರಭಾವ, ಜಗತ್ತಿನ ಸೃಷ್ಟಿ, ಆಸುರೀಪ್ರವೃತ್ತಿಯ ನಿಂದೆ, ದೈವೀಪ್ರಕೃತಿಯುಳ್ಳವರ ಭಗವದ್ಭಜನೆಯ ಪ್ರಕಾರ, ಸಕಾಮ-ನಿಷ್ಕಾಮ ಉಪಾಸನೆ.
೧೦) ವಿಭೂತಿಯೋಗ— ಭಗವಂತನ ಮಹಿಮೆ— "ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ | ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ||", "ಆದಿತ್ಯಾನಾಮಹಂ ವಿಷ್ಣುಃ", "ಜ್ಯೋತಿಷಾಂ ರವಿಃ", "ನಕ್ಷತ್ರಾಣಾಮಹಂ ಶಶೀ", ವೇದಾನಾಂ ಸಾಮವೇದಃ, ದೇವಾನಾಂ ವಾಸವಃ, ಇಂದ್ರಿಯಾಣಾಂ ಮನಃ, ಭೂತಾನಾಂ ಚೇತನಾ, ರುದ್ರಾಣಾಂ ಶಂಕರಃ, ಪರ್ವತಗಳಲ್ಲಿ ಮೇರು, ಪುರೋಹಿತರಲ್ಲಿ ಬೃಹಸ್ಪತಿ, ಸೇನಾನಿಗಳಲ್ಲಿ ಸ್ಕಂದ, ಸರೋವರಗಳಲ್ಲಿ ಸಾಗರ, ಮಹರ್ಷಿಗಳಲ್ಲಿ ಭೃಗು, ಮಾತುಗಳಲ್ಲಿ ಓಂಕಾರ, ಯಜ್ಞಗಳಲ್ಲಿ ಜಪಯಜ್ಞ, ಸ್ಥಾವರಗಳಲ್ಲಿ ಹಿಮಾಲಯ, ವೃಕ್ಷಗಳಲ್ಲಿ ಅಶ್ವತ್ಥ, ದೇವರ್ಷಿಗಳಲ್ಲಿ ನಾರದ, ಸಿದ್ಧರಲ್ಲಿ ಕಪಿಲಮುನಿ, ನರರಲ್ಲಿ ರಾಜ, ಆಜ್ಞೆಮಾಡುವವರಲ್ಲಿ ಯಮ, ದೈತ್ಯರಲ್ಲಿ ಪ್ರಹ್ಲಾದ, ಹರಿವಜಲದಲ್ಲಿ ಗಂಗಾನದಿ, ಸ್ತ್ರೀಯರ ಕೀರ್ತಿ-ಕಾಂತಿ-ಮಾತು-ನೆನಪುಶಕ್ತಿ-ಅರ್ಥವನ್ನು ತಿಳಿಯುವ ಮೇಧಾಶಕ್ತಿ-ಇಂದ್ರಿಯನಿಗ್ರಹಶಕ್ತಿ-ಕ್ಷಮಾಗುಣಗಳು, ಛಂದಸ್ಸುಗಳಲ್ಲಿ ಗಾಯತ್ರೀ, ಪಾಂಡವರಲ್ಲಿ ಅರ್ಜುನ, ಕವಿಗಳಲ್ಲಿ ಶುಕ್ರಾಚಾರ್ಯ….ಹೀಗೆ ಅನಂತಮಹಿಮ ಭಗವಂತ. "ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ | ತತ್ತದೇವಾವಗಚ್ಛ ತ್ವಂ ಮಮ ತೇಜೋऽಂಶಸಂಭವಮ್ ||" ಅಥವಾ ಹೆಚ್ಚೇಕೆ? ನಾನೀ ಸಮಗ್ರ ಸೃಷ್ಟಿಯನ್ನು ಕೇವಲ ನನ್ನ ಒಂದಂಶಮಾತ್ರದಿಂದ ವ್ಯಾಪಿಸಿರುವೆನು ಎಂದಿರುವನು ಪರಮಾತ್ಮ. (ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠಗ್ದಶಾಂಗುಲಮ್— ಪುರುಷಸೂಕ್ತ)
೧೧) ವಿಶ್ವರೂಪದರ್ಶನಯೋಗ— ಅನನ್ಯಭಕ್ತಿಯಿಂದ ಮಾತ್ರ ಲಭ್ಯ.
೧೨) ಭಕ್ತಿಯೋಗ— ಸಾಕಾರ, ನಿರಾಕಾರ ಉಪಾಸನೆ…
೧೩) ಕ್ಷೇತ್ರ-ಕ್ಷೇತ್ರಜ್ಞವಿಭಾಗಯೋಗ— ದೇಹ-ದೇಹೀ, ಸೃಷ್ಟಿ / ಪ್ರಕೃತಿ-ಪುರುಷ / ಪರಮಾತ್ಮ
೧೪) ಗುಣತ್ರಯವಿಭಾಗಯೋಗ
೧೫) ಪುರುಷೋತ್ತಮಯೋಗ— ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
೧೬) ದೈವಾಸುರಸಂಪದ್ವಿಭಾಗಯೋಗ— "ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ | ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ ತ್ಯಜೇತ್ ||", "ಯೇ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ | ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ||"
೧೭) ಶ್ರದ್ಧಾತ್ರಯವಿಭಾಗಯೋಗ— ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ | ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ ||
೧೮) ಮೋಕ್ಷಸಂನ್ಯಾಸಯೋಗ / ಕರ್ಮದ ಬಿಡುಗಡೆ— ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |...ಪಾವನಾನಿ ಮನೀಷಿಣಾಮ್ || ಸಂಗಂ ತ್ಯಕ್ತ್ವಾ, ಕರ್ತವ್ಯಾನಿ ಇತಿ. ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ | ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ || ಜ್ಞಾನಂ ಕರ್ಮ ಚ ಕರ್ತಾ ಚ ತ್ರಿದೈವ ಗುಣಭೇದತಃ || ಎಲ್ಲದರಲ್ಲೂ ಅಖಂಡವಾಗಿರುವ ಪರತತ್ತ್ವವನ್ನು ತಿಳಿಯುವುದು ಸಾತ್ತ್ವಿಕಜ್ಞಾನ. ಬೇರೆ ಬೇರೆಯಾಗಿ ತಿಳಿಯುವುದು ರಾಜಸ. ಯಾವ ತಿಳುವಳಿಕೆಯೂ ಇಲ್ಲದೆ, ಯುಕ್ತಿಗೆ ಹೊಂದದ ಯಾವುದೋ ಒಂದರಲ್ಲಿ ಮಾತ್ರ ಎಲ್ಲವೂ ಇದೆಯೆಂಬ ತಿಳಿವೇ ತಾಮಸ. ಸಂಗ-ರಾಗ-ದ್ವೇಷ-ಫಲಾಪೇಕ್ಷೆರಹಿತವಾಗಿ ಸದಾ ಕರ್ತವ್ಯಭಾವದಿಂದ ಪಟ್ಟುಹಿಡಿದು ಮನಸ್ಸಿ ಏರಿಳಿತಗಳಿಲ್ಲದೆ ನಿರಾಯಾಸವಾಗಿ ಮಾಡುವ ಕರ್ಮ ಸಾತ್ತ್ವಿಕ, ಅಂತಹ ಕರ್ತೃವೂ ಸಾತ್ತ್ವಿಕನು. ಫಲಕಾಮನೆಯಿಂದ, ಅಹಂಕಾರದಿಂದ, ಹಿಂಸಾತ್ಮಕವಾಗಿ, ಲೋಭದಿಂದ, ದುರ್ಭಾವನೆಯಿಂದ, ಹಿಗ್ಗುತ್ತಾ ಕುಗ್ಗುತ್ತಾ ಆಯಾಸಭಾವದಿಂದ ಮಾಡಿದ್ದು ರಾಜಸ. ಆತನೇ ರಾಜಸೀಕರ್ತೃವು. ಪೂರ್ವಾಪರ-ಸಾಧ್ಯಾಸಾಧ್ಯ ವಿವೇಚನೆಯಿಲ್ಲದೆ, ತಕ್ಕಷ್ಟು ಎಚ್ಚರಿಕೆಯಿಲ್ಲದೆ, ಎದೆಯುಬ್ಬಿಸಿಕೊಂಡು ಮೋಸಗಾರನಾಗಿ ಮತ್ತೊಬ್ಬರ ಬಾಳಿಗೆ ತೊಡಕಾಗಿ ಸೋಮಾರಿಯಾಗಿ ಜೋಲುಮುಖದವನಾಗಿ ಎಂದಿಗೂ ಮುಗಿಯದ್ದನ್ನು ಅವಿವೇಕದಿಂದ ಮಾಡಿದಾಗ ಕರ್ಮವು ತಾಮಸ. ಆತನೇ ತಾಮಸೀಕರ್ತೃವು.
ಯತ್ತದಗ್ರೇ ವಿಷಮಿವ ಪರಿಣಾಮೇ ಅಮೃತೋಪಮಮ್ | ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ||
ಇಂದ್ರಿಯ-ಮನೋನಿಗ್ರಹ, ತಪಸ್ಸು, ಶುಚಿತ್ವ, ಸೈರಣೆ, ಸರಳತನ, ವೇದಾರ್ಥವನ್ನು ತಿಳಿಯುವುದು-ಅನುಭವಿಸುವುದು, ಭಗವಂತನನ್ನು ನಂಬುವುದು— ಬ್ರಾಹ್ಮಣರ ಹುಟ್ಟುಗುಣಕ್ಕೆ ತಕ್ಕ ಕೆಲಸಗಳು.
ಬಲಶಾಲಿಗಳ ಮುಂದೆ ಎದೆಗೆಡದಿರುವುದು, ಹಗೆಗೆ ಸೋಲದ ಕೆಚ್ಚು, ಕಷ್ಟ ಬಂದಾಗ ಕಳವಳಗೊಳ್ಳದಿರುವುದು, ಹಿಡಿದ ಕೆಲಸವನ್ನು ಸಾಧಿಸುವ ಸಾಮರ್ಥ್ಯ, ಹೋರಾಟದಲ್ಲಿ ಪಲಾಯನಮಾಡದಿರುವುದು, ಸತ್ಪಾತ್ರರಿಗೆ ದಾನ, ಸೇವಕರಲ್ಲಿ ಅಧಿಕಾರವನ್ನು ತೋರಿಸುವುದು— ಕ್ಷತ್ರಿಯರ ಹುಟ್ಟುಗುಣಕ್ಕೆ ತಕ್ಕ ಕೆಲಸಗಳು.
ಕೃಷಿ, ಪಶುಪಾಲನೆ, ವ್ಯಾಪಾರ— ಹುಟ್ಟುಗುಣಕ್ಕೆ ತಕ್ಕ ವೈಶ್ಯರ ಕೆಲಸಗಳು.
ಸೇವೆಯು ಶೂದ್ರನ ಹುಟ್ಟುಗುಣಕ್ಕೆ ತಕ್ಕ ಕೆಲಸ.
ತನ್ನ ತನ್ನ ಕರ್ಮದಿಂದಲೇ ಭಗವಂತನನ್ನು ಅರ್ಚಿಸಿ, ಪ್ರತಿಯೊಬ್ಬರೂ ಯೋಗ್ಯತೆಯನ್ನೂ, ಸಿದ್ಧಿಯನ್ನೂ ಹೊಂದುತ್ತಾರೆ. ತನ್ನ ಕರ್ಮವು ದೋಷವುಳ್ಳದ್ದೆಂದು ಬಿಡುವಹಾಗಿಲ್ಲ. ಯಾಕೆಂದರೆ ಹೊಗೆಮುಚ್ಚಿದ ಬೆಂಕಿಯಂತೆ, ಪೂರ್ಣದೋಷಮುಕ್ತವಾದದ್ದು ಯಾವುದೂ ಇಲ್ಲ. ಹೀಗಾಗಿ, "ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ | ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ ||"
ಕೊನೆಗೆ, "ವಿಮೃಶ್ಯೈತದಶೇಷೇಣ ಯತೇಚ್ಛಸಿ ತಥಾ ಕುರು" ಎನ್ನುತ್ತಾನೆ ಭಗವಂತ. ಆಗ ಅರ್ಜುನನು, "ನಷ್ಟೋ ಮೋಹಃ ಸ್ಮೃತಿರ್ಲಬ್ಧಾ" "ಕರಿಷ್ಯೇ ವಚನಂ ತವ" ಎಂದು ಧನುಸ್ಸನ್ನೇರಿಸಿ ಯುದ್ಧಾರಂಭಕ್ಕೆ ಅಣಿಯಾಗುತ್ತಾನೆ.
……ಹೀಗೆ ಭಗವದ್ಗೀತೆ ಅನಂತ ನುಡಿಮುತ್ತುಗಳ, ಸಾಧನಾಪಥಗಳ ತವನಿಧಿ.
Comments
Post a Comment