ಬ್ರಾಹ್ಮಣ್ಯ ೪
ಆ ಜಾಗೃವಿರ್ವಿಪ್ರಃ |
(ಸಾಮವೇದ ೧೩೫೭)
ಬ್ರಾಹ್ಮಣನು ಸದಾ ಜಾಗೃತನಾಗಿರಬೇಕು.
ಋಭುರ್ಧೀರ ಉಶನಾ ಕಾವ್ಯೇನ |
(ಸಾಮವೇದ ೬೭೯)
ಬ್ರಾಹ್ಮಣನು ಸಂಶೋಧಕಪ್ರವೃತ್ತಿಯವನೂ, ವಿದ್ವಾಂಸನೂ ಹಾಗೂ ಕಾವ್ಯರಚನೆಯಿಂದ ಕವಿಯೂ ಆಗಿರುವನು.
ಋಷಿರ್ವಿಪ್ರಃ ಪುರ ಏತಾ ಜನಾನಾಮ್ |
(ಸಾಮವೇದ ೬೭೯)
ಬ್ರಾಹ್ಮಣನು ಮಂತ್ರದ್ರಷ್ಟೃವಾಗಿ ಋಷಿಯೂ, ಜನರ ಅಗ್ರಣಿಯೂ ಆಗಿರುವನು.
ವಿಪ್ರಾ ಋತಸ್ಯ ವಾಹಸಾ |
(ಸಾಮವೇದ ೧೩೦೯)
ಬ್ರಾಹ್ಮಣರು ಸತ್ಯಧರ್ಮಗಳ ಪ್ರಚಾರಕರಾಗಿರುವರು.
Comments
Post a Comment