Posts

ವೇದಗಳಲ್ಲಿ ಜಾತಿ ಪದ್ಧತಿ ಇದೆಯೆ?

 https://chat.whatsapp.com/LQZLd2x1JAUHRVxAQEjPM6 *🕉️ಹರೇರಾಮ🕉️* *✨ವೇದಗಳಲ್ಲಿ ಜಾತಿ ಪದ್ಧತಿ ಇದೆಯೆ?* ವೇದಗಳಲ್ಲಿ ಜಾತಿ ಪದ್ಧತಿ ಎನ್ನುವುದು ಇಲ್ಲ. ಅರ್‍ಯ ಜನಾಂಗವು ಪರದೇಶದಿಂದ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿಯ ಜನರನ್ನು ಸೋಲಿಸಿ ಅವರನ್ನು ಆಳುಗಳನ್ನಾಗಿ ಮಾಡಿಕೊಂಡರೆಂಬುದು ಇದುವರೆಗೂ ನಾವು ನಂಬಿದಂತಹ ಅತಿ ದೊಡ್ಡ ಸುಳ್ಳು . ಇದು ವಿದೇಶಿಯರು ಚಿತ್ರಿಸಿದಂತಹ ಸುಳ್ಳು. ನಮ್ಮ ಜನರನ್ನು ಈ ಸುಳ್ಳಿನಿಂದ ನಂಬಿಸಿ, ನಮ್ಮನ್ನು ಬೇರೆ ಬೇರೆ ಮಾಡಿ ತಾವು ಲಾಭವನ್ನು ಪಡೆದುಕೊಂಡರು. ಅವರು ಆಗ ತಮ್ಮ ಸ್ವಾರ್ಥಕ್ಕಾಗಿ ಮಾಡಿದಂತಹ ಸುಳ್ಳನ್ನು ನಂಬಿ, ಈಗಲು ಜನರು ಅಶಾಂತಿ ಇಂದ ಬಾಳುತ್ತಿದ್ದಾರೆ. ಸತ್ಯಾಂಶದಲ್ಲಿ ವೇದವು ಬಸವಣ್ಣನವರು ಹೇಳಿದಂತೆ “ಕಾಯಕವೇ ಕೈಲಾಸ” ಎಂಬುದನ್ನು ಸಾರುತ್ತದೆ. ಯಾವುದೇ ಕೆಲಸವಾನ್ನು ಗೌರವದಿಂದ ಹಾಗು ಪೂಜ್ಯತೆ ಇಂದ ಮಾಡಬೇಕು ಎಂದು ವೇದ ಮಂತ್ರಗಳು ಸಾರುತ್ತದೆ. ಹಲವಾರು ಕಡೆ ದಾಸ / ದಸ್ಯು ಅಥವ ರಕ್ಷಸ್ ಎಂಬ ಪದವನ್ನು ಆರ್‍ಯನ್ನರ ಗುಲಾಮರು ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ವಿದೇಶಿಯರ ಈ ತಪ್ಪು ಗೊತ್ತಿಲ್ಲದೆ ಮಾಡಿದಂತಹ ತಪ್ಪಲ್ಲ ಬದಲಾಗಿ ಬೇಕೆಂದಲೇ ಚಿತ್ರಿಸಿದಂತಹ ತಪ್ಪು. ನಾವು ಏಕೆ ಈ ವಿದೇಶಿಯರ ಮೇಲೆ ಹೆಚ್ಚು ಕೋಪತೋರಿಸಿದ್ದೇವೆ ಎಂದರೆ ಇವರ ಸ್ವಂತ ಲಾಭಕ್ಕಾಗಿ ನೊರಾರು ವರ್ಷಗಳಿಂದ ಜನರನ್ನು ಮೋಸಮಾಡಿ ವೇದಗಳನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ. ವೇದಗಳಲ್ಲಿ ಶೂದ್ರರೂ ಸೇರಿದಂತ...

Dr. Krishna Moorthy, Dambe-Punacha's youtube channel link

  https://youtube.com/channel/UCbMhtpcLoDtWptFD2wJrTKg  

Spiritual Vibes- Topics by JAVANER CLUBHOUSE

  https://youtube.com/playlist?list=PLCjQnGh28p9oM_0VuZsFLRK6oY5rceH6X  

@ವಿಶ್ವಶಾಂತಿಃ / World Peace ಮರುಳಮುನಿಯನ ಕಗ್ಗ ವಾಚನ ಹಾಗೂ ವ್ಯಾಖ್ಯಾನ

  https://youtube.com/playlist?list=PLCjQnGh28p9qJNa41dLCvcUgdo3JZ3zwL ಮರುಳಮುನಿಯನ ಕಗ್ಗ ವಾಚನ ಮತ್ತು ವ್ಯಾಖ್ಯಾನ (ಕ್ಲಬ್ ಹೌಸ್ ಆಪ್)

कृष्णामृतमहार्णवः, ಕೃಷ್ಣಾಮೃತಮಹಾರ್ಣವಃ

कृष्णामृतमहार्णवः (आचार्य-मध्वः) ಕೃಷ್ಣಾಮೃತಮಹಾರ್ಣವಃ (ಆಚಾರ್ಯ ಮಧ್ವರು) ॐ (ओ३म्) १) मङ्गलाचरणं प्रस्तावना च अर्चितः संस्मृतो ध्यातः कीर्तितः कथितः श्रुतः । यो ददात्यमृतत्वं हि स मां रक्षतु केशवः ॥ १ ॥ ಓ೩ಮ್ ೧) ಮಙ್ಗಲಾಚರಣಮ್ ಮತ್ತು ಪ್ರಸ್ತಾವನಾ ಅರ್ಚಿತಃ ಸಂಸ್ಮೃತೋ ಧ್ಯಾತಃ ಕೀರ್ತಿತಃ ಕಥಿತಃ ಶ್ರುತಃ । ಯೋ ದದಾತ್ಯಮೃತತ್ವಂ ಹಿ ಸ ಮಾಂ ರಕ್ಷತು ಕೇಶವಃ ॥ ೧ ॥ ಭಕ್ತಿಯಿಂದ ಅರ್ಚಿಸಲ್ಪಟ್ಟ (ಬಾಹ್ಯವಾಗಿ ಪೂಜಿಸಲ್ಪಟ್ಟ), ಚೆನ್ನಾಗಿ ಗಾಢವಾಗಿ ಸ್ಮರಿಸಲ್ಪಟ್ಟ (ಮಾನಸಪೂಜೆ), ಏಕಾಗ್ರತೆಯಿಂದ ಧ್ಯಾನಿಸಲ್ಪಟ್ಟ (ನಿರಂತರ ಸ್ಮರಣೆ), ಕೀರ್ತನೆಮಾಡಲ್ಪಟ್ಟ (ಹಾಡಲ್ಪಟ್ಟ, ಸ್ತುತಿಸಲ್ಪಟ್ಟ, ತನ್ನಷ್ಟಕ್ಕೆ ಗುಣಗಾನಮಾಡಲ್ಪಟ್ಟ), ಕಥಿಸಲ್ಪಟ್ಟ (ಕೇಳುವವರಿಗೆ ಹೇಳಲ್ಪಟ್ಟ), ಗಮನಕೊಟ್ಟು ಕೇಳಲ್ಪಟ್ಟ (ಸಾವಧಾನತೆಯಿಂದ ಶ್ರವಣಮಾಡಲ್ಪಟ್ಟ) ಯಾವನು ಅಮೃತಸ್ವರೂಪವಾದ ಮೋಕ್ಷವನ್ನೇ ದಯಪಾಲಿಸುವನೋ ಅಂತಹ ಕೇಶವನು ನನ್ನನ್ನು ರಕ್ಷಿಸಲಿ. * ಭಕ್ತಿಯಿಂದ ಪೂಜಿಸಿದರೆ, ನೆನೆದರೆ, ಧ್ಯಾನಿಸಿದರೆ, ಹಾಡಿದರೆ, ಆಡಿದರೆ, ಕೇಳಿದರೆ ಸಾವಿರದ ನೆಲೆಯ ನೀಡುವವನು; ಅಂಥ ಕೇಶವ ಕಾಪಾಡಲಿ ನನ್ನನ್ನು.  ಹೀಗೆ, ಅರ್ಚನ, ಸ್ಮರಣ, ಧ್ಯಾನ, ಕೀರ್ತನ, ಕಥನ, ಶ್ರವಣ— ಇವು (೬) ಸಾರ್ಥಕಜೀವನದ ಷಡಂಗಗಳು; ಸಾಧಕನ ನಿತ್ಯಕರ್ಮಗಳು; ಮುಕ್ತಿಯ ಮೆಟ್ಟಿಲುಗಳು. * (—*ಬನ್ನಂಜೆ ಗೋವಿಂದಾಚಾರ್ಯ...

ಶ್ರೀನಾರಾಯಣಶತಕಮ್

(೧) ಶ್ರೀನಾರಾಯಣಶತಕಮ್ https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3   (Audio link) (ಅತ್ಯಷ್ಟಿಶ್ಛಂದಃ—  ಶಿಖರಿಣೀವೃತ್ತಮ್)  ಬೃಹದ್ದಿವ್ಯಂ ವಿಶ್ವಂ ಸೃಜತಿ ವಿಧಿರೂಪೇಣ ವಪುಷಾ ಅವತ್ಯಾನಂದೇನ ಪ್ರಕಟಿತಸಮಸ್ತಂ ವಿಷ್ಣುವಪುಷಾ | ಹರತ್ಯನ್ತೇ ಸರ್ವಂ ಪರಮಶಿವರೂಪೇಣ ವಪುಷಾ ಅವತ್ವಾನಂದೀ ನಃ ಪರಮಸುಖದಾನೇನ ಕೃಪಯಾ || ೧ || ಬ್ರಹ್ಮರೂಪ ಧರಿಸಿ ಬೃಹತ್ತೂ, ದಿವ್ಯವೂ ಆದ ವಿಶ್ವವನ್ನು ಸೃಷ್ಟಿಸಿ, ವಿಷ್ಣುರೂಪಿಯಾಗಿ ಪರಮಾನಂದದಿಂದ ಪ್ರಕಟವಾದ ಸಮಸ್ತವನ್ನೂ ಸಲಹಿ, ಶಿವನಾಗಿ ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನೊಳಕ್ಕೇ ವಿಲೀನ ಮಾಡುವ ಆನಂದಮಯನಾದ ಭಗವಂತನಾದ ಶ್ರೀಮನ್ನಾರಾಯಣನು ಕೃಪೆಯಿಂದ ಪರಮಸುಖರೂಪವಾದ ಮೋಕ್ಷ / ಜೀವನ್ಮುಕ್ತಿಯನ್ನಿತ್ತು ನಮ್ಮನ್ನು ರಕ್ಷಿಸಲಿ. ಮಹಾವಿಷ್ಣುಂ ವನ್ದೇ ಜಗತಿ ನಿಖಿಲೇ ವ್ಯಾಪ್ತವಪುಷಂ ಸ ಸೃಷ್ಟ್ಯಾದೌ ನಾರಾಯಣವಪುಧೃತಃ ಕ್ಷೀರಜಲಧೌ | ಸ ಶೇಷೇऽಭೂಚ್ಛಾಯೀ ವರವರದಮೂರ್ತಿಃ ಪರಗತಿಃ ಸ ಪಾಯಾದ್ದೇವೋ ಮಾಧವಮಧುಹರಃ ಪೂರ್ಣಪುರುಷಃ || ೨ || ಸಮಗ್ರ ಜಗತ್ತಿನಲ್ಲಿ ವ್ಯಾಪಿಸಿರುವ ಶರೀರವುಳ್ಳ ಮಹಾವಿಷ್ಣುವನ್ನು ವಂದಿಸುತ್ತೇನೆ. ಅವನು ಸೃಷ್ಟಿಯ ಆದಿಯಲ್ಲಿ ಆದಿನಾರಾಯಣರೂಪ ಧರಿಸಿ, ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಪವಡಿಸಿದ್ದನು. ಅಂತಹ ತನ್ನ ನಿಜಭಕ್ತರಿಗೆ ಬೇಡಿದ ವರವನ್ನೀವ ವರದಮೂರ್ತಿಯೂ, ಪರಗತಿ (ಶ್ರೇಷ್ಠ ಹಾದಿ—  ಮು...